22 ಲಕ್ಷ ರೂ ಮೌಲ್ಯದ ಟಿಪ್ಪರ್ ವಶಪಡಿದ ಹಾರೂಗೇರಿ ಪೊಲೀಸರು
22 ಲಕ್ಷ ರೂ ಮೌಲ್ಯದ ಟಿಪ್ಪರ್ ವಶಪಡಿದ ಹಾರೂಗೇರಿ ಪೊಲೀಸರು
ಬೆಳಗಾವಿ : (RNI) ಪೊಲೀಸರೆಂದರೆ ಹೀಗೆ ಒಮ್ಮೆ ಚಾಣಕ್ಯರಾದರೆ ಇನ್ನೊಮ್ಮೆ ಅಭಿಮನ್ಯುಗಳಾಗುತ್ತಾರೆ. ಇತ್ತೀಚಿಗೆ 2 ಲಕ್ಷ ರೂ. ಮೌಲ್ಯದ ಬುಲೆಟ್ ಕಳ್ಳನನ್ನ ಕೇವಲ ನಾಲ್ಕೆ ಗಂಟೆಯಲ್ಲಿ ವಶಪಡಿಸಿಕೊಂಡ ಹಾರೂಗೇರಿ ಪೊಲೀಸರು ಇದೀಗ ಮತ್ತೆ 22 ಲಕ್ಷ ರೂ. ಕಿಮ್ಮತ್ತಿನ ಟಿಪ್ಪರ್ ವಶಪಡಿಸಿಕೊಂಡು ಹಾರೂಗೇರಿ ಪೊಲೀಸ್ ಠಾಣೆಗೆ ಕ್ರಿಯಾಶೀಲ ಪೊಲೀಸರೆಂಬ ಗರಿಮೆ ತಂದಿದ್ದಾರೆ.ಹೌದು ಬೆಳಗಾವಿ ಎಸ್ಪಿ ಸಂಜೀವ ಪಾಟೀಲರ ಹಾಗೂ ಡಿವಾಯ್ಎಸ್ಪಿ ಜಲ್ದಿಯವರ, ಹಾರೂಗೇರಿ ಸಿ ಪಿ ಐ ರವಿಚಂದ್ರ ಅವರ ಮಾರ್ಗದರ್ಶನದಲ್ಲಿ ಕಳ್ಳರನ್ನು ಬೆಂಬಿಡದೆ ಬೆನ್ನಟ್ಟಿದ ತನಿಖಾ ವಿಭಾಗದ ಪಿ ಎಸ್ ಐ ಶ್ರೀ ಆರ್ ಆರ್ ಕಂಗನೂಳಿ, ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳಾದ ಆರ್ ಪಿ ಕಟೇಕರಿ,ಎಸ್ ಎ ಶಾಂಡಗೆ, ಬಸವರಾಜ ಹೊಸಟ್ಟಿ, ಪ್ರಕಾಶ ಸಪ್ತಸಾಗರೆಯವರು ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ಹತ್ತಿರದ ಮುರಡಿ ಎಂಬ ಸ್ಥಳದಲ್ಲಿದ್ದ ಟಿಪ್ಪರ್ ವಾಹನವನ್ನು ಹುಡುಕಿ ವಶಪಡಿಸಿಕೊಂಡ ಘಟನೆ ನಡೆದಿದೆ. ಇವರ ಈ ಸಾಹಸ ಕಾರ್ಯಕ್ಕೆ ಎಲ್ಲೆಡೆ ಜನಮೆಚ್ಚುಗೆ ವ್ಯಕ್ತವಾಗಿದ್ದು, ತನಿಖಾ ವಿಭಾಗದ ಪಿಎಸ್ಐ ಆರ್ ಆರ್ ಕಂಗನೂಳಿಯವರ ಟೀಮ್ ಇದೀಗ ಶೈನ್ ಆಗಿದೆ.ಪೊಲೀಸರೆಂದರೆ ಹೀಗಿರಬೇಕು ಎಂದು ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹಗಲಿರುಳು ಸುತ್ತಾಡಿ ವಾಹನ ಗುರುತಿಸಿ,ಹಾರೂಗೇರಿ ಪೊಲೀಸ್ ಠಾಣೆಯ ಅಪರಾದ ಸಂಖ್ಯೆ 170/2023 ಕಲಂ 379 ಐಪಿಸಿ ನೇದ್ದರಲ್ಲಿ ಕಳ್ಳತನ ಪ್ರಕರಣದಲ್ಲಿ ಕಳುವಾದ ಭಾರತ್ ಬೆಂಚ್ ಟಿಪ್ಪರ ವಾಹನ ಕಳ್ಳತನ ಮಾಡಿದ ಕಳ್ಳರ ಪತ್ತೆ ಮಾಡಿ ಟಿಪ್ಪರ ವಶಪಡಿಸಿಕೊಂಡ ಹಾರೂಗೇರಿ ಪೊಲೀಸರ ಈ ಕಾರ್ಯ ಹಾಗೂ ಸಂಬಂಧಿಕರಿಗೆ ಒಪ್ಪಿಸುವ ಸಾಮಾಜಿಕ ಕಾಳಜಿಗೆ ನಮ್ಮದೊಂದು ಸಲಾಂ
What's Your Reaction?